ದ್ವಿಚಕ್ರ ವಾಹನ (2-Wheeler) ಸವಾರನೊಬ್ಬ ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ ಟ್ರಾಫಿಕ್ ನಿಯಮವನ್ನು (Traffic Violation) ಪಾಲಿಸದ್ದಕ್ಕೆ ಪೊಲೀಸರು ಚಲನ್ನನ್ನು ಕಳುಹಿಸಿದ ವಿಚಿತ್ರ ಘಟನೆ ಬಿಹಾರದಲ್ಲಿ (Bihar) ನಡೆದಿದೆ. ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದಿದ್ದರೇ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ ಚಲನ್ (Challan) ಬರುವುದು ಸಾಮಾನ್ಯ.
ಆದರೆ ಬಿಹಾರದ ಸಮತಿಪುರದಲ್ಲಿ ಬೈಕ್ ಸವಾರ ಕೃಷ್ಣಕುಮಾರ್ ಝಾ ಎಂಬಾತನಿಗೆ ಚಲನ್ ಬಂದಿದೆ. ಕೃಷ್ಣಕುಮಾರ್ ಝಾ ಎಂಬಾತ ಸ್ಕೂಟಿಯಲ್ಲಿ ಬನಾರಸ್ಗೆ ಹೋಗುತ್ತಿದ್ದರು. ಈ ವೇಳೆ ಅವರ ಮೊಬೈಲ್ಗೆ 1,000 ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೇ ಈ ಹಣವನ್ನು ಈಗಾಗಲೇ ಪಾವತಿಸಲಾಗಿದೆ ಎನ್ನುವುದರ ಕುರಿತು ಚಲನ್ ಬಂದಿದೆ. ಆ ಚಲನ್ನಲ್ಲಿ 2020ರ ಅಕ್ಟೋಬರ್ನಲ್ಲಿ ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಎಂದು ಉಲ್ಲೇಖಿಸಲಾಗಿದೆ.















































