ಮೊಣಕಾಲು ಗಾಯದಿಂದ ಬಳಲುತ್ತಿರುವ ಆಸ್ಟ್ರೇಲಿಯಾ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ 2023ರ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪರವಾಗಿ ಎಲ್ಲಾ ಪಂದ್ಯಗಳಲ್ಲಿ ಪಾಲ್ಗೊಳ್ಳುವುದು ಅನುಮಾನ. ಈ ಬಗ್ಗೆ ಆರ್ಸಿಬಿ ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಮಾತಾಡಿರುವ ಮ್ಯಾಕ್ಸ್ವೆಲ್, ಗಾಯ ಗುಣವಾಗಲು ತಿಂಗಳುಗಳು ಬೇಕಾಗಬಹುದು. ಆದರೆ ಐಪಿಎಲ್ನಲ್ಲಿ ಪಾಲ್ಗೊಳ್ಳಲು ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.
ಕೋವಿಡ್ ನಿರ್ಬಂಧದಿಂದ ಎರಡು ವರ್ಷಗಳ ನಂತರ ಆರ್ಸಿಬಿಯ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ಮ್ಯಾಕ್ಸ್ವೆಲ್ ಕಾತುರದಲ್ಲಿದ್ದಾರೆ.ಇತ್ತೀಚೆಗೆ ನಡೆದ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯಗಳಲ್ಲಿ ಮೊದಲ ಪಂದ್ಯದಲ್ಲಿ ಆಡಿ, ಉಳಿದ ಎರಡು ಪಂದ್ಯಗಳಲ್ಲಿ ಗೈರಾಗಿದ್ದರು. ಸ್ನೇಹಿತನೊಂದಿಗೆ ಟೆನ್ನಿಸ್ ಕೋರ್ಟ್ನಲ್ಲಿ ಓಡುವಾಗ ಇಬ್ಬರೂ ಸಿಲುಕಿ ಬಿದ್ದು ಮ್ಯಾಕ್ಸ್ ಗಾಯಗೊಂಡಿದ್ದರು.














































