ಬಹು ನಿರೀಕ್ಷಿತ ಕಾಂಗ್ರೆಸ್ (Congress) ಅಭ್ಯರ್ಥಿಗಳ ಎರಡನೇ ಪಟ್ಟಿ ಗುರುವಾರ ಬಿಡುಗಡೆಯಾಗಲಿದೆ. ನಿನ್ನೆ ಸುದೀರ್ಘ ಸಭೆಗಳನ್ನು ನಡೆಸಿದ್ದ ಕಾಂಗ್ರೆಸ್ ಹೈಕಮಾಂಡ್ (Congress High Command) ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಎರಡನೇ ಪಟ್ಟಿಯಲ್ಲಿ ಸುಮಾರು ಐವತ್ತು ಅಭ್ಯರ್ಥಿಗಳ ಹೆಸರು ಪ್ರಕಟಗೊಳ್ಳಬಹುದು ಎಂದು ಕಾಂಗ್ರೆಸ್ ಉನ್ನತ ಮೂಲಗಳು ಹೇಳಿವೆ. ನಿನ್ನೆ ಸ್ಕೀನಿಂಗ್ ಸಭೆ ನಡೆಸಿದ್ದ ನಾಯಕರು ಚುನಾವಣಾ ಸಮಿತಿ ಮುಂದೆ ಹೊಸ ಪಟ್ಟಿಯನ್ನು ಪ್ರಸುತ್ತ ಪಡಿಸಿದರು. ಪಟ್ಟಿ ಪರಿಶೀಲಿಸಿ ಚರ್ಚೆ ನಡೆಸಿದ ಕೇಂದ್ರ ಚುನಾವಣಾ ಸಮಿತಿ ಸದಸ್ಯರು ಐವತ್ತಕ್ಕೂ ಹೆಚ್ಚು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದರು.