ಗ್ಯಾಸ್ ಸಿಲಿಂಡರ್, ಅಡುಗೆ ಎಣ್ಣೆ, ಪೆಟ್ರೋಲ್, ಡಿಸೇಲ್ ಸೇರಿದಂತೆ ಪ್ರತಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಬಡವರ ಬದುಕನ್ನು ಮೂರಾಬಟ್ಟೆ ಮಾಡಿದ ಬಿಜೆಪಿ ಸರ್ಕಾರದ ಜನಪ್ರತಿನಿಧಿಗಳು ಯಾವ ಮುಖ ಹೊತ್ತು ಮತಕೇಳಲು ಮನೆ ಮನೆಗೆ ಹೋಗುತ್ತಿದ್ದಾರೆ ಎಂದು ತಮಿಳುನಾಡಿನ ತಿರುವಳ್ಳುರುಲೋಕಸಭಾ ಸದಸ್ಯ ಕೆ.ಜಯಕುಮಾರ್ ಕಿಡಿಕಾರಿದರು.
ಕೆ.ಆರ್.ಪುರ ಕ್ಷೇತ್ರದ ಮಹದೇವಪುರ ಗ್ರಾಮ,ನಾರಾಯಣಪುರ, ಗಂಗಮ್ಮದೇವಾಸ್ಥಾನ ರಸ್ತೆ,ಮುನಿರೆಡ್ಡಿ ಬಡಾವಣೆ,ಉದಯನಗರ ,ಚಿಕ್ಕ ಸುಬ್ಬಣ್ಣ ರಸ್ತೆ,ಮೆತ್ರಿ ಶಾಲೆ ಸಮೀಪ,ನೇತ್ರಾವತಿ ಬಡಾವಣೆ,ಗಂಗಪ್ಪ ಬಡಾವಣೆ,ಪೈ ಲೇಔಟ್ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿ ಮಾತನಾಡಿದರು












































