ಕಳಪೆ ಬ್ಯಾಟಿಂಗ್ ಮಾಡಿದರೂ, ಬೌಲಿಂಗ್ನಲ್ಲಿ ಬಿಗಿ ಹಿಡಿತ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ 5 ರನ್ಗಳ ರೋಚಕ ಜಯ ಸಾಧಿಸಿದೆ. 9 ಪಂದ್ಯಗಳ ಪೈಕಿ 6ರಲ್ಲಿ ಜಯ ಸಾಧಿಸಿರುವ ಟೈಟಾನ್ಸ್ ಪಡೆ ಈಗಾಗಲೇ ಪ್ಲೇ ಆಫ್ ತಲುಪುವ ಹಂತದಲ್ಲಿದೆ. ಆದರೆ 9ರಲ್ಲಿ ಕೇವಲ 3 ಪಂದ್ಯಗಳಲ್ಲಿ ಜಯ ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಉಳಿದೆಲ್ಲ ಪಂದ್ಯಗಳೂ ನಿರ್ಣಾಯಕವಾಗಿವೆ. ಒಂದು ವೇಳೆ ಇಂದಿನ ಪಂದ್ಯ ಸೋತಿದ್ದರೆ, ಬಹುತೇಕ ಪ್ಲೇ ಆಫ್ನಿಂದ ಹೊರಬೀಳುವುದು ಖಚಿತವಾಗುತ್ತಿತ್ತು. ಆದರೆ ಗೆಲುವಿನ ಮೂಲಕ ಪ್ಲೇ ಆಫ್ ಕನಸನ್ನ ಜೀವಂತವಾಗಿಸಿಕೊಂಡಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 130 ರನ್ ಗಳಿಸಿತು. ಗೆಲುವಿಗೆ 131 ರನ್ ಗುರಿ ಪಡೆದ ಗುಜರಾತ್ ಟೈಟಾನ್ಸ್ ನಿಗದಿತ ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿ ಸೋಲೊಪ್ಪಿಕೊಂಡಿತು.