ಕಾಂಗ್ರೆಸ್ (Congress) ಶಾಸಕ ಹಾಗೂ ಚಿತ್ತಾಪುರ (Chittapura) ಅಭ್ಯರ್ಥಿಯಾಗಿರುವ ಪ್ರಿಯಾಂಕ್ ಖರ್ಗೆ (Priyank Kharge) ಇದೀಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಒಂದೆಡೆ ಚುನಾವಣೆ (Election) ಹತ್ತಿರ ಬರುತ್ತಿದ್ದು, ಇನ್ನೊಂದೆಡೆ ತಮ್ಮ ಪತ್ನಿ ಶ್ರುತಿ ಖರ್ಗೆ (Shruthi Kharge) ಅನಾರೋಗ್ಯದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಶ್ರುತಿ ಖರ್ಗೆ ಬ್ರೈನ್ ಟ್ಯೂಮರ್ನಿಂದ (Brain Tumor) ಬಳಲುತ್ತಿದ್ದು, ಮುಂಬೈನ (Mumbai) ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪತ್ನಿ ಅಲ್ಲದೇ ಒಡಹುಟ್ಟಿದ ಸಹೋದರ ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪತ್ನಿ ಹಾಗೂ ಆರೋಗ್ಯ ವಿಚಾರಣೆಗಾಗಿ ಪ್ರಿಯಾಂಕ್ ಖರ್ಗೆ ಒಂದು ದಿನ ಆಸ್ಪತ್ರೆಗೆ ತೆರಳಿದರೆ ಮತ್ತೊಂದು ದಿನ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ನಾಮಪತ್ರ ಸಲ್ಲಿಕೆಯ ಬಳಿಕ ಪ್ರಿಯಾಂಕ್ ಖರ್ಗೆ ಚಿತ್ತಾಪುರ ಕ್ಷೇತ್ರದಲ್ಲೇ ಪ್ರವಾಸ ಮಾಡುತ್ತಿದ್ದಾರೆ. ಈ ಬಾರಿ ಬಿಜೆಪಿ (BJP) ನಾಯಕರು ಪ್ರಿಯಾಂಕ್ ಖರ್ಗೆಯವರನ್ನು ಟಾರ್ಗೆಟ್ ಆಗಿ ಇರಿಸಿಕೊಂಡು ಸೋಲಿಸುವ ಪ್ಲಾನ್ ಮಾಡಿಕೊಂಡಿದ್ದಾರೆ.














































