ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದ್ದು, ದಿಢೀರ್ ಮಳೆಯಿಂದಾಗಿ ವಾಹನ ಸವಾರರ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ಗ್ರಾಮಾಂತರದ ನೆಲಮಂಗಳ ಸುತ್ತಮುತ್ತ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿದಲ್ಲದೇ. ಗುಡುಗು ಸಹಿತ ಭಾರೀ ಮಳೆಗೆ ಕತ್ತಲು ಆವರಿಸಿದಂತಾಗಿದೆ. ಮತ್ತಷ್ಟು ಮಳೆಬರುವ ಲಕ್ಷಣಗಳು ಕಾಣಿಸುವಂತಾಗಿದೆ. ಭಾರೀ ಬಿಸಿಲಿನ ತಾಪಮಾನಕ್ಕೆ ತತ್ತರಿಸಿದ ಜನರಿಗೆ ದಿಢೀರ್ ಮಳೆಯಿಂದ ತಂಪೆರೆದಂತಾಗಿದೆ. ಈ ಹಿಂದೆಯೇ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.















































