ಕೊನೆಗೆ ಬೌಲರ್ಗಳು ನೀಡಿದ ಅತ್ಯುತ್ತಮ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಹೈದರಾಬಾದ್ ಸನ್ ರೈಸರ್ಸ್ (Sunrisers Hyderabad) ವಿರುದ್ಧ 7 ರನ್ಗಳ ರೋಚಕ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 144 ರನ್ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ್ದ ಹೈದರಾಬಾದ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಹೊಡೆದು ಸೋಲೊಪ್ಪಿಕೊಂಡಿತು. ಐಪಿಎಲ್ (IPL) ಅಂಕಪಟ್ಟಿಯಲ್ಲಿ 7 ಪಂದ್ಯ ಆಡಿ 2 ರಲ್ಲಿ ಜಯಗಳಿಸಿರುವ ಡೆಲ್ಲಿ 4 ಅಂಕ ಪಡೆದು 10ನೇ ಸ್ಥಾನದಲ್ಲೇ ಮುಂದುವರೆದರೆ ಹೈದರಾಬಾದ್ 2 ಜಯ ಸಾಧಿಸಿ 4 ಅಂಕ ಪಡೆದು 9ನೇ ಸ್ಥಾನದಲ್ಲಿ ಮುಂದುವರೆದಿದೆ.
